ಸುನಿಲ್ (1 ಏಪ್ರಿಲ್ 1964 - 24 ಜುಲೈ 1994) ಕನ್ನಡ ಚಿತ್ರರಂಗದ ಉತ್ತಮ ನಟರಾಗಿದ್ದವರು. ನಟನಾಗಿ ಸುನಿಲ್ ಕೆಲವು ಉತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ . ಶೃತಿ (1990),ಮನ ಮೆಚ್ಚಿದ ಸೊಸೆ. (1992), ಬೆಬೆಳ್ಳಿ ಕಾಲುಂಗುರ (1992) ಮತ್ತು ಶಾಂಭವಿ (1992). ಚಿತ್ರಗಳಲ್ಲಿ ನಟಿಸಿದ್ದಾರೆ. == ವೃತ್ತಿ == ಸುನಿಲ್ ಅವರು ಉದಯೋನ್ಮುಖ ನಟರಾಗಿದ್ದವರು. ಸುಮಾರು ೩೦ ಚಿತ್ರಗಳಲ್ಲಿ ನಾಯಕನಾಗಿ ಇವರು ನಟಿಸಿ ತಮ್ಮದೇ ಅಭಿಮಾನಿಗಳನ್ನು ಸಂಪಾದಿಸಿದ್ದವರು. ಆಗಿನ ಬಹು ಬೆಡಿಕೆಯ ನಟಿ ಮಾಲಾಶ್ರೀಯವರ ಜೊತೆ ನಟಿಸಿದ ಬೆಳ್ಳಿ ಕಾಲುಂಗುರ ಚಿತ್ರ ಭರ್ಜರಿ ಪ್ರದರ್ಷನ ಕಂಡ ಚಿತ್ರವಾಗಿತ್ತು. ನಟಿ ಶೃತಿಯವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರವಾದ ಶೃತಿ ಚಿತ್ರದಲ್ಲಿ ಸುನಿಲ್ ಅವರ ಅಮೋಘ ನಟನೆ ಪ್ರೇಕ್ಷಕರನ್ನು ಸಂತಸಗೊಳಿಸಿತ್ತು. == ನಿಧನ == ೧೯೯೪ರಲ್ಲಿ ಸು ನಿಲ್ ಮತ್ತು ನಟಿ ಮಾಲಾಶ್ರೀಯವರ ಕಾರು ಟ್ರಕ್ಕಿಗೆ ಡಿಕ್ಕಿ ಹೊಡೆದು ಮಾಲಾಶ್ರೀ ಅನೇಕ ಗಾಯಗಳಿಗೆ ಒಳಗಾಗಿದ್ದರು, ಸುನೀಲ್ ಒಂದು ಗಂಟೆಯೊಳಗೆ ನಿಧನರಾದರು. == ಆಯ್ದ ಕೆಲವು ಚಿತ್ರಗಳು. == ಟೆಂಪ್ಲೇಟು: ಕರ್ನಾಟಕದ ಜನರ ಪಟ್ಟಿ ಕರ್ನಾಟಕದ ಸಿನಿಮಾ ಭಾರತೀಯ ಚಲನಚಿತ್ರ ನಟರ ಪಟ್ಟಿ ಭಾರತದ ಸಿನಿಮಾ == ಉಲ್ಲೇಖಗಳು ==